Mohd Rafi saab||Bahuth yaad aaaya||Music Empire

0 Просмотры
Издатель
ಪ್ರತಿವರ್ಷ ಜುಲೈ 31 ಒಂದು ವಿಷಾದದೊಂದಿಗೆ ಎಚ್ಚರಗೊಳ್ಳುತ್ತದೆ. ಆದರೆ ಒಂದು ಸ್ಫೂರ್ತಿದಾಯಕ ಮುಗುಳುನಗೆಯೊಂದಿಗೆ ನಿದ್ರಿಸಲು ಹೊರಡುತ್ತದೆ.
ರಫಿ ನಮ್ಮನ್ನು ಅಗಲಿದ ದಿನವಿದು. ಅವರ ಮುಗುಳುನಗೆ ಮನಸ್ಸಿನ ದುಗುಡವನ್ನೆಲ್ಲ ತೊಡೆದುಹಾಕುತ್ತದೆ.

ರಫಿ ಇಲ್ಲದ ಗಾಯನ ಲೋಕವನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ರಫಿ ಹಾಡದೆ ಉಳಿದ ಭಾರತದ ಒಂದು ಸಂಗೀತ ಪ್ರಕಾರವೂ ಇಲ್ಲ. ಅವರದೊಂದು ವಿಶಿಷ್ಟ ದಾಖಲೆಯಿದೆ. ಅದು ಅವರು ಹಾಡಿದ ಹಾಡುಗಳ ಸಂಖ್ಯೆಗೆ ಸಂಬಂಧಿಸಿದ್ದಲ್ಲ. ಸಂಶೋಧಕರ ಪ್ರಕಾರ ರಫಿ 517 ವಿಭಿನ್ನ ಪಾತ್ರಗಳಿಗೆ ದನಿ ನೀಡಿದ್ದಾರೆ. ನಾಯಕನಟರಿಗೆ ಹೊರತಾಗಿಯೂ ಅವರಷ್ಟು ವೈವಿಧ್ಯಮಯ ಪಾತ್ರ ಮತ್ತು ವಿಷಯ(theme) ಗಳಿಗೆ ಹಾಡಿದ ಇನ್ನೊಬ್ಬ ಗಾಯಕ ಪ್ರಾಯಶಃ ಜಗತ್ತಿನಲ್ಲೇ ಇಲ್ಲ. ಆ ಪಾತ್ರಗಳ ಪಟ್ಟಿ ನೋಡಿ: ಬೀದಿ ವ್ಯಾಪಾರಿಗಳು, ಚಪ್ಪಲಿ ಹೊಲೆಯುವವ, ಅಡುಗೆಭಟ್ಟ, ಸೈಕಲ್ ರಿಕ್ಷಾವಾಲಾ, ಟ್ಯಾಕ್ಸಿಡ್ರೈವರ್, ಪಾನ್‍ಬೀಡಾ ಮಾರುವವ, ಬಜ್ಜಿ ಮಾರುವವ, ಐಸ್‍ಕ್ರೀಮ್ ಮಾರುವವ, ಮಾಲಿಷ್ ಮಾಡುವವ, ಟಾಂಗಾವಾಲ, ಪ್ರವಾಸಿಗರ ಪೋಟೋ ತೆಗೆಯುವವ ಹೀಗೆ ಜನರ ನಡುವಿನ ಉಪೇಕ್ಷಿತ ಜೀವಿಗಳ ಬದುಕಿನ ಲಹರಿಗೆ ರಫಿಯ ದನಿ ಆಪ್ತವಾಗಿರುತ್ತಿತ್ತು. Transgenderಗಳ ದನಿಯ ಜೊತೆಗೂ ದನಿಗೂಡಿಸಿದ್ದಾರೆ ಇವರಲ್ಲದೆ ಅಂಧ ಭಿಕ್ಷುಕರು, ಪೂಜಾರಿಗಳು, ರೈತರು, ವಿಮಾ ಪ್ರತಿನಿಧಿಗಳು, ಸೈನಿಕರು, ಕೂಲಿ ಕಾರ್ಮಿಕರು, ಧರ್ಮ ಪ್ರಚಾರಕರು, ಸಾಧು ಸನ್ಯಾಸಿಗಳು, ದರವೇಶಿಗಳು, ವ್ಯವಸ್ಥೆಯನ್ನು ಪ್ರಶ್ನಿಸುವ ಕುಡುಕರು (‘ನಯಾ ರಾಸ್ತಾ’ ಚಿತ್ರದ ‘ಮೈನೆ ಪೀ ಶರಾಬ್’ ಒಂದು ಅದ್ಭುತ ಉದಾಹರಣೆ) ಹೀಗೆ ಹಲವು ಪಾತ್ರಗಳು ರಫಿಯ ದನಿಯ ಹಿನ್ನೆಲೆಗೆ ತೆರೆಯ ಮೇಲೆ ಅಭಿನಯಿಸಿದ್ದವು.
ವಿಷಯದ ವಿಚಾರದಲ್ಲೂ ಅಷ್ಟೆ. ದಾರ್ಶನಿಕ ಸಂದೇಶಗಳು, ಮಾನವೀಯ ಸಂದೇಶಗಳು, ವೃತ್ತಿಗಳು, ಊರುಗಳು, ತಿಂಡಿತಿನಿಸುಗಳು, ಹೂವುಗಳು, ಪ್ರಾಣಿಪಕ್ಷಿಗಳು, ಹಬ್ಬಗಳು, ದೇವತೆಗಳು, ದಿರಿಸುಗಳು ಇತ್ಯಾದಿಗಳ ಪ್ರಸ್ತಾಪವಿರುತ್ತಿದ್ದ ಅವರ ಹಾಡುಗಳಂತೂ ಬೇಕಾದಷ್ಟಿವೆ. ಅವರು ಹಾಡಿದ ಮಕ್ಕಳ ಹಾಡುಗಳದೂ ಒಂದು ದಾಖಲೆಯೆ.
ಗೀತಾ ದತ್, ಸುಮನ್ ಕಲ್ಯಾಣ್‍ಪುರ್, ಸುರಯ್ಯಾ, ಆಶಾ ಭೋಸ್ಲೆ, ಲತಾ ಮಂಗೇಶ್ಕರ್, ಶಂಶದ್ ಬೇಗಮ್, ಮುಬಾರಕ್ ಬೇಗಮ್, ಶಾರದಾ, ಸುಲಕ್ಷಣಾ ಪಂಡಿತ್ ಮುಂತಾದ ಗಾಯಕಿಯರು ತಮ್ಮ ವೃತ್ತಿ ಜೀವನದ ಅತಿ ಹೆಚ್ಚು ಯುಗಳ ಗೀತೆಗಳನ್ನು ಹಾಡಿದ್ದು ರಫಿಯ ಜೊತೆ. ರಫಿ ಒಟ್ಟು 14 ದೇಶಿ ಮತ್ತು 4 ವಿದೇಶಿ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಈ ದಾಖಲೆಯನ್ನು ಇನ್ಯಾವ ಗಾಯಕರೂ ಈ ತನಕ ಸರಿಗಟ್ಟಿಲ್ಲ.
Категория
Документальные фильмы
Комментариев нет.
Яндекс.Метрика